ಒಂದು ಅದ್ಭುತ ಕಾರ್ಯಕ್ರಮ

 ಇಂದು ಒಂದು ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದ ಆನಂದ. ಸೋದರಿ ನಿವೇದಿತಾ ಪ್ರತಿಷ್ಠಾನ, ಶಿವಮೊಗ್ಗ ಇವರು ಊರ ಹೊರಗಿನ ಸ್ಲಂ(ಸೇವಾ ಬಸ್ತಿ) ಒಂದರ ಒಂದಷ್ಟು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅದರಲ್ಲಿ ಏನು ಮಹಾ ಅಂತೀರಾ? 


ಸೋದರಿ ನಿವೇದಿತಾ ಪ್ರತಿಷ್ಠಾನ ಒಂದು ಸಾಮಾಜಿಕ ಸಂಘಟನೆ ನನ್ನಾಕೆ ಈ ಸಂಘಟನೆ ಸೇರಿ ಹತ್ತಿರ ಹತ್ತಿರ ಎರಡು ವರ್ಷ ಆಯಿತು. ಹಾಗೆ ನಾನು ಯುವ ಬ್ರಿಗೇಡ್ ಗೆ ಜೋಡಿಸಿ ಕೊಂಡಿದ್ದೀನಿ. ಚಿಕ್ಕ ಮಕ್ಕಳು ಇರುವುದರಿಂದ ನಾವೇನು ಎಲ್ಲಾ ಕಾರ್ಯಕ್ರದಲ್ಲಿ ಜೋಡಿಸಿ ಕೊಂಡಿಲ್ಲಾವಾದರು ಸಮಯದ ಪರಿಧಿಯಲ್ಲಿ ಎಷ್ಟು ಸಾದ್ಯವೋ ಅಷ್ಟು ಕೆಲಸದಲ್ಲಿ ಪಾಲ್ಗೊಳುತ್ತೇವೆ. 


ಸೋದರಿ ನಿವೇದಿತಾ ಪ್ರತಿಷ್ಠಾನದ ಈ ಕಾರ್ಯಕ್ರಮ ತುಂಬಾ ಅರ್ಥ ಪೂರ್ಣವಾಗಿತ್ತು. ಪ್ರತಿಷ್ಠಾನದ ಸದಸ್ಯರು ಊರ ಹೊರಗಿರುವ ಸೇವಾ ಬಸ್ತಿಯ ಮಕ್ಕಳ ಜೊತೆ ನಿರಂತರ ಸಂಪರ್ಕ ವನ್ನು ಮಾಡಿದ್ದಾರೆ. ವರ್ಷ ಪೂರ್ತಿ ಮಕ್ಕಳೊಂದಿಗೆ ವಿವಿಧ ಕಾರ್ಯಕ್ರಮ ಹಾಗೂ ನಿರಂತರ ಕಲಿಕೆ ತರಗತಿ ಇಂದ ಮಕ್ಕಳ ಸರ್ವಾಂಗೀಣ ಅಭಿವೃದಿಗೆ ಸೋದರಿಯರು ಶ್ರಮ ಪಡುತ್ತಿದ್ದರೆ. 

ಈ ಕಾರ್ಯಕ್ರಮಕ್ಕಾಗಿ ಒಂದು ತಿಂಗಳಿಂದ ಹಾಡು, ನೃತ್ಯ, ದೈಹಿಕ ಶಿಕ್ಷಣ  ನೀಡಿ ಅಣಿ ಗೊಳಿಸಿದ್ದರು. 


ಈ ದಿನ ಮಕ್ಕಳು ನಿತ್ಯ ಶ್ಲೋಕ ಗಳಿಗೆ ಅಭಿನಯಿಸಿ ಶ್ಲೋಕದ ಮಹತ್ವ ತಿಳಿಸಿದರು. ನಂತರ ಜೋಗದ ಸಿರಿ ಹಾಗೂ ಶಿಶು ಗೀತೆಗೆ ನೃತ್ಯ ಮಾಡಿದರು. ಹನುಮಾನ ಚಾಲೀಸಗೆ ಅಭಿನಯಿಸಿ ಮಾಡಿದ ದೃಶ್ಯ ರೂಪಕ ಮನಸ್ಸಿಗೆ ಮುದ ನೀಡಿತು. ಹನುಮಾನ ವೇಶಧಾರಿ ಸೊಗಸಾಗಿ ಅಭಿನಯಿಸಿದನು. ಕೊನೆಯಲಿ ಅವರು ಪ್ರದರ್ಶಿಸಿದ ದೈಹಿಕ ಕಸರತ್ತು ಎಲ್ಲರ ಗಮನ ಸೆಳೆಯಿತು. ವಿವಿಧ ಪಿರಮಿಡ್  ಆಕೃತಿ, ಕೊನೆಯಲ್ಲಿ ಮಾಡಿದ ಅಲೆಗಳು ತುಂಬಾ ಚೆನ್ನಾಗಿ ಮೂಡಿ ಬಂದವು. ಪ್ರೇಕ್ಷಕರ ೫ ನಿಮಿಷ ಕರತಾಡನ ಮಾಡುತ್ತಲೇ ಮಕ್ಕಳಿಗೆ ಹರಿಸಿದರು. 


ಇದರ ಹಿಂದಿನ ಪ್ರತಿಷ್ಠಾನದ ಸೋದರಿಯರ ಪರಿಶ್ರಮ ಎಷ್ಟು ಹೇಳಿದರು ಕಡಿಮೆಯೇ. 


ಇವರ ಕಾರ್ಯ ಹೀಗೆ ಮುಂದುವರಯಲಿ ಎಂದು ಪ್ರಾರ್ಥಿಸುತ್ತಾ. 








ಶ್ರೀನಿವಾಸ ಕಲ್ಯಾಣ

ಸ್ತ್ರೀ ಯರೆಲ್ಲ ಬನ್ನಿರೆ ಶ್ರೀನಿವಾಸ ನ ಪಾಡೋಣ

ಜ್ಞಾನಗುರುಗಳಿಗೆ ವಂದಿಸಿ ಮುಂದೆ ಕಥೆಯ ಹೇಳೊಣ

ಗಂಗೆ ತೀರದಿ ಋಷಿಗಳು ಒಂದು ಯಾಗವ ಮಾಡುತ ಬಂದುನಿಂತ ನಾರದ ಮುನಿ ಯಾರಿಗೆಂದು ಕೇಳಲು

ಅರಿತು ಬರಬೇಕೆನುತಲಿ ಆ ಮೃಗಮುನಿ ಹೊರಟನು  ಅಂದು ರಾಯನ ಕಂದನ ಮಗನ ಮಂದಿರಕ್ಕೆ ಬಂದನು

ವೇದಗಳನ್ನು ಓದುತ್ತಾ ಹರಿಯ ಕೊಂಡಾಡುತ ಅಲ್ಲಿರುವ ಬೊಮ್ಮನ ಕಾಣುತ ಕೈಲಾಸಕ್ಕೆ ಬಂದನು

ಕಂಬುಕಂಠ ಪಾರ್ವತಿ ಕುಳಿತಿರುವುದನೆ ಕಂಡನು

ಪೃಥ್ವಿ ಯೊಳಗೆ ನಿಮ್ಮಲಿಂಗ ಶ್ರೇಷ್ಠ ವಾಗಲೆಂದನು ವೈಕುಂಠ ಕ್ಕೆ ಬಂದನು ವಾರಿಜಾತನ ಕಂಡನು 

ಕೆಟ್ಟ ಕೋಪದಿಂದ ಒದ್ದರೆ ಎಷ್ಟು ನೋಯಿತೆಂದನು 

ತಟ್ಟನೆ ಬಿಸಿನೀರ ತಂದು ನೆಟ್ಟಗೆ ಪಾದವ ತೊಳೆಯಲು.

ಬಂದ ಕಾರ್ಯವಾಯಿತೆಂದು ಅಂದು ಮುನಿಪ ತೆರಳಿದ.


ಬಂದು ನಿಂತು ಸಭೆಯೊಳಗೆ ಇಂದೀರೇಶನ ಪಾಡುತ

ಹರಿಯ ಕೂಡೆ ಕಲಹ ಮಾಡೆ ಕೊಲ್ಲಾಪುರಕೆ ನಡೆದಾಳು

ಸತಿಯು ಪೋಗೆ ಪತಿಯು ಹೊರಟು ಗಿರಿಯ ಬಂದು ಸೇರಿದ

ಹುತ್ತಾದೊಳಗೆ ಹತ್ತು ಸಾವಿರ ಗುಪ್ತವಾಗೆ ನೆಲಸಿದ.

ಬ್ರಹ್ಮ ಧೇನು ಆದನು ರುದ್ರ ವತ್ಸಲನಾದನು

ಧೇನು ಮುಂದೆ ಮಾಡಿಕೊಂಡು ಗೋಪಿ ಸುತೆಯು ಹೊರಟಾಳು

ಕೋಟಿ ಹೊನ್ನು ಬಾಳೋದು ಕೊಡದ ಹಾಲು ಕರೆವುದು. 

ಪ್ರೀತಿಯಿಂದಲಿ ತನ್ನ ಮನೆಗೆ ತಂದು ಕೊಂಡನು ಚೋಳನು.

ಚಂದದಿಂದಲಿ ಒಂದು ದಿವಸ ಕಂದಗೆ ಹಾಲು ಕೊಡಲಿಲ್ಲ.

ಅಂದು ರಾಯನ ಮಡದಿ ಕೋಪಿಸಿ ಬಂದು ಹೊಡೆದಳೆ ಗೋಪನ

ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ಹೋಗಲು 

ಕಾಮಧೇನು ಕರೆದ ಹಾಲು ಹರಿಯ ಶಿರದಿ ಬಿದ್ದಿತು

ಇಷ್ಟು ಕಷ್ಟ ಕೊಟ್ಟಿತೆಂದು ಪೆಟ್ಟು ಬಡಿಯೆ ಹೋದಾನು

ಕೃಷ್ಣ ತನ್ನ ಮನದಿ ಯೋಚಿಸಿ ಕೊಟ್ಟ ತನ್ನ ಶಿರವನ್ನು

ಎಳುತಾಳೆ ಮರದಿ ಉದ್ದ ಎಕವಾಗೇ ಹರಿಯಿತು.

ರಕ್ತವನ್ನು ಕಂಡ ಗೋಪನು ಮತ್ತೆ ಸ್ವರ್ಗ ಸೇರಿದ

ಕಷ್ಟವನ್ನೆಲ್ಲ  ತಿಳಿದ ಗೋವು ಅಷ್ಟು ಬಂದು ಹೇಳಿತು

ಶಂಖ ಚಕ್ರ ನಡಗುತ, ಶಿರದಿ ರಕ್ತ ಹರಿಯುತ 

ಇಷ್ಟು ಕಷ್ಟಗಳನು ಎಲ್ಲ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟ ಕಾರಣ ಭ್ರಷ್ಟ ಪಿಶಾಚಿಲಾಗೆಂದ

ಇಷ್ಟು ಕಲಿಯುಗ ಮುಗಿಯುವ ತನಕ ಕಷ್ಟ ತನಗೆ ಉಂಟೆಂದ

ಪೆಟ್ಟು ವೇದನೆ ತಾಳಲಾರದೆ ಬೃಹಸ್ಪತಿ ಚಾರ್ಯರ ಕರಿಸಿದ 

ಔಷಧಕ್ಕೆ ತನಗೆ ಒಂದು ಎರ್ಪಾಟಗಬೇಕೆಂದ

ಮೂರು ಹೆಜ್ಜೆಯ ಸ್ಥಳವ ಕೊಟ್ಟರೆ ಮೊದಲ ಪೂಜೆ ನಿಮಗೆಂದ 

ಪಾಕ ಪಕ್ವ ಮಾಡಲಿಕೆ ಆಕೆ ಬಕುಳೆ ಬಂದಳು 

ಬಾನು ಕೋಟಿ ತೇಜನು ಬೇಟೆಯಾಡೆ ಹೊರಟನು

ಮುಂದೆ ಬಾಚಿ ಗೊಂಡ್ಯ ಹಾಕಿ ದುಂಡುಮಲ್ಲಿಗೆ ಮುಡಿದನು

ಕರ್ಣ ಕುಂಡಲಕರದಿ ಹೊಳೆಯೆ ಕಸ್ತೂರಿ ತಿಲಕ ತಿದ್ದಿದ

ಅಂಗುಲಿಗೆ ಉಂಗುರವಿಟ್ಟು ರಂಗ ಶೃಂಗಾರ ವಾದನು

ಕನಕಭೂಷಣವಾದ ಕುದುರೆ ಕಮಲಾನಾಥ ನೇರಿದ

ಕರಿಯ ನೆನೆದು ಹರಿಯು ಬರಲು ಕಾಂತೆಯರು ಕಂಡರು

ಯಾರು ಬ್ರಾಹ್ಮಣ ಶ್ರೇಷ್ಠ ರಲಿ ನಾರಿಯರು ಇರುವೊ ಸ್ಥಳದಿ 

ಕಾರ್ಯವೇನು ನಿಮಗೆ ಇಲ್ಲಿ ಹೇಳು ಎಂದು ಕೇಳಲು

ಗಗನರಾಯನ ಮಗಳಲ್ಲೆ ಕಾರ್ಯ ಉಂಟು ನಮಗೆಂದ

ಅಷ್ಟುಮಂದಿ ಸೇರಿಕೊಂಡು ಪೆಟ್ಟು ಬಡಿಯೆ ಹೋದರು

ಕಲ್ಲು ಮಳೆಯ ಕರೆದರು ಕುದುರೆ ಕೆಳಗೆ ಬಿದ್ದಿತು

ಕ್ಲೇಷ ಪಟ್ಟು ವಾಸುದೇವ ಶೇಷ ಪರ್ವತ ಸೇರಿದ

ಪಾರ ಮನ್ನ ಮಾಡಿಕೊಂಡು ಉಣ್ಣು ಮಗನೇ ಎಂದಳು 

ಅಮ್ಮ ನನಗೆ ಅನ್ನ ಬೇಡ ನನ್ನ ಮೇಲಿನ ವೈರಿಯೆ ಕಣ್ಣು ಕಾಣದ ದೈವ ಆಕೆಯನ್ನು ನಿರ್ಮಾಣ ಮಾಡಿದ

ಯಾವದೇಶ ಎಂದಳಾಕೆ ಈಗ ನನಗೆ ಹೇಳೆಂದಳು


ಕಂಚುಮಣಿಯ ಧರಿಸಿಕೊಂಡು ಕೂಸು ಕಂಕುಳಲೆತ್ತಿಕೊಂಡು 

ಧರಣಿ ದೇವಿಗೆ ಕಣಿಯ ಹೇಳಿ ಗಿರಿಯ ಬಂದು ಸೇರಿದ

ಹೊನ್ನು ಹಣವು ಒಂದು ಎಂದರೆ ಕನ್ನಿಕೆ ಯಾಕೆ ದೊರಕಲಿಲ್ಲ 

ಚಿಕ್ಕವಳಿಗೆ ಮಕ್ಕಳಿಲ್ಲ ಮತ್ತೆ ಮದುವೆ ಮಾಡುವೆ ಮನ್ನಿಸಿ ಬಂದೆನ್ನನು ಧನ್ಯನಾಗೆ ಮಾಡೆಂದ 

ಕುಬೇರನ್ನ ಕರೆಸಿದ ಹಣವನ್ನೆ ತರಿಸಿದ 

ವಲ್ಲಭಳ ಕರಿಯಲಿಕೆ ಕೊಲ್ಹಾಪುರಕೆ ಹೋದರು


ಅಷ್ಟವರ್ಗವನ್ನೆ ಮಾಡಿ ಇಷ್ಟ ದೇವರ ಪೂಜಿಸಿ 

ಲಕ್ಷ್ಮಿ ಸಹಿತ ಹೊರಟಾರಗ ಅರ್ತಿಯಿಂದಲೆ ನಡೆದರು

ಗರುಡ ಹೆಗಲ ಹೇರಿಕೊಂಡು ಸಕಲ ಸುರರು ನೆರೆದರು

ಅರ್ತಿಯಿಂದಲೆ ಮುತ್ತು ಮಾಣಿಕ ಮಂಟಪದಲ್ಲಿ ಕುಳಿತರು

ಕನ್ಯೆ ಯಾದ ಪದ್ಮಾವತಿಗೆ ಕಂಕಣವ ಕಟ್ಟಿದ 

ವೆಂಕಟೇಶ ಪದ್ಮಾವತಿಗೆ ಮಾಂಗಲ್ಯ ಕಟ್ಟಿದ

ಶ್ರೀನಿವಾಸನ ಮದುವೆ ನೋಡಲು ಸ್ತ್ರೀ ಯರೆಲ್ಲ ಬನ್ನಿರೆ

ಪದ್ಮಾವತಿಯ ಮದುವೆ ನೋಡಲು ಮುದ್ದು ಬಾಲೆರು ಬನ್ನಿರಿ.


----------------------------------------------------------------------------

ಅರ್ತಿಯಿಂದ ಹೇಳಿಕೇಳಿದ ಮನುಜರಿಗೆ ಮುಕ್ತಿ ಪದವಿ ಕೊಡುವ ಶ್ರೀವೆಂಕಟೇಶ. 

----------------------------------------------------------------------------


ಬೆಟ್ಟದೊಡೆಯ ಶ್ರೀನಿವಾಸ ಗೆ ನಿತ್ಯ ಮಂಗಳಂ

ಲೋಕಮಾತೆಯಾದ ಪದ್ಮಾವತಿ ಗೆ ಮಂಗಳಂ!!ಪ!!

ಎರಡು ಕರದಿ ಶಂಖಚಕ್ರವು ಗದೆಯು ಪದ್ಮವು

ಶೃಂಗಾರ ದೊಡಗೂಡಿ ದ್ವಾರ ವಜ್ರದ ಬಂಗಾರ ವಿರುವನು.!!೧!!

----------------------------------------------------------------------------

ಬಂದು ನೆಲೆಸೌ - ಅಜ್ಜಿ ಹಾಡು

ತಾಯೆ ಬಂದು ನೆಲೆಸೌ
ಇಂದಿರೆ ಎನ್ನೆಯ ಮಂದಿರದೊಳಗಾನಂದದಿ

ಹಲವು ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು ದೇವಿಯೆ
ನಳಿನಾನೇತ್ರೆ ಕರುಣಾದಿಂದಲಿ
ಒಲಿದು ಬಂದಿರಿ ದೇವಿಯೆ

ಮುತ್ತು ಮಾಣಿಕ್ಯದ ಮಂಟಪದಲ್ಲಿ
ರತ್ನದ ಪೀಠವನಿರಿಸುವೆನು
ವಿಷ್ಣು ಸಹಿತಲೆ ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಪೂಜಿಪೆ

ವರಮಣಿ ಖಚಿತದ ನೆರೆಗಿಂಡಿಯೊಳು
ಸುರನದಿ ಗಂಗೆಯ ತುಂಬುತಲಿ
ಸಿರಿವರನರಸಿಯ ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು

ಅಂಗಜ ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ ಮಾಡುವೆನು
ಅಂದವಾದ ಪೀತಾಂಬರವನು
ಸುಂದರನಡುವಿನೊಳುಡಿಸುವೆನು

ಸಿರಿಮುಡಿಯೆಳೆಸುತ ಹೆರಳನು ಹಾಕುತ
ಪರಿಪರಿ ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ ಸರ್ವಾಭರಣವ
ಪರಮಾದರದಿ ಹಾಕುವೆ

ಅರಶಿನ ಕುಂಕುಮ ಅಕ್ಷತೆ ಗಂಧ
ಪರಿಪರಿ ಕುಸುಮದ ಮಾಲೆಗಳ
ಸಿರಿವರನರಸಿಯ ಕೊರಳಿಗೆ ಹಾರವ
ಪರಮಾದರದಿ ಹಾಕುವೆ

ಪರಿಪರಿ ಪುಷ್ಪದಿಂದೊಡಗೂಡುತಲಿ
ವರಧೂಪಾದಿ ದೀಪಗಳ
ಬಗೆಬಗೆ ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ ಮಾಡುವೆ

ಮಂಗಳವಾದ್ಯದಿಂದೊಡಗೂಡುತಲಿ
ಅಂಗನೆಯರೆಲ್ಲರು ಹರುಷದಲಿ
ಮಂಗಳಾರತಿ ಎತ್ತಿ ಚಂದದಿ
ವಂದಿಸಿ ನಾನು ಬೇಡುವೆ

ರಕ್ಷಿಸು ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ ನಾ ಮಾಡುವೆನು
ರಕ್ಷಿಸೆಮ್ಮನು ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಬೇಡುವೆ

ಶನಿ ಮಾಹಾತ್ಮೆ 2

‌‌‌‍‌‌ಬಲ್ಲೆ ಬಲ್ಲೆನು ನಿನ್ನ ಬಹಳ ಪ್ರತಾಪವ  ಎಲ್ಲ್ಲೆಲ್ಲೂ ಕಾಲು ಕಾದೀ
ಬಲ್ಲಿದ ವರ ನೀನು ಬಲು ಭಂಗ ಪಡಿಸಿದೆ ನಿಲ್ಲೋ ಶನೇಶವರನೆ.
ಹರಿಹರ ಬ್ರಹ್ಮ ದೇವತೆಗಳ ನಿಲ್ಲಿಸಿದೆ ಕರುಣ ನಿನಗೊಂದಿಸ್ಟಿಲ್ಲ
ಹರಿಶ್ಚಂದ್ರ ನಳ ಚಕ್ರವರ್ತಿಯ ಸೋಲಿಸಿದಂತ ವರಪಾಂಡವರ ನಿಲ್ಲಿಸಿದೆ
ಇದ್ದದ್ದು ಫಲವೇನು ಸಕಲ ವಿಷಯಾಂಗಳಿಗೆ ಮುದ್ದಾರಿಪು ಮಾಡದೆ
ಮುದ್ದು ಮಾತುಗಳಾಡುವ ಸತಿಯು ಎನಗೆ ಬದ್ಧ ದೇಷಿಯು ಆದಳು
ಒಳೆಯವರಾಗಿದ್ದ ಸಂಗಾತಿಯರ ಸ್ನೇಹ ಎಲ್ಲಾಹೋಗಿ ಕೇಡಿಸಿದೀ
ಬಲ್ಲಿದ ವರ ನೀನು ಅಲ್ಲೆಹೋಗಿ ನೆಲಸಿ ಇಲ್ಲ ಹೊಗೆದೆನಿಸಿದಿ
ದೇಶದಿ ಪತಿಗೆ ಅಂಜದೆ ಪೊಗಿ ಪರದೇಶಿಯನ್ನನು ಮಾಡಿದೀ
ದೇಶವಬಿಟ್ಟು ಕಾಶಿಗೆ ಹೋದರೆ ಅಲ್ಲೇ ವಾಸವಾಗಿ ನೆಲಸಿದೀ
ದೇಶದಿ ವಾಸನೆ ಶ್ರೀವೆಂಕಟೇಶನೇ ಲೇಸು ಪಾಲಿಸು ಎಮ್ಮಾನೂ
ಲೇಸು ಪಾಲಿಸು ಎನ್ನನು ಹೇಳವನ ಕಟ್ಟೆ ರಂಗ ನಾಥ ಎನ್ನನು ಸಲಹೋ

ಉಂಡಳಿಗೆ ಹೂರಣವು ಸಕ್ಕರೆಯು ಕಡುಕಬ್ಬು
ಒಬ್ಬಟ್ಟು ಹೋಳಿಗೆ ದೋಸೆ ಕಡುಬುಗಳು
ಸೊಂಡಿಲಾ ಗಣಪನಿಗೆ ನೈವೇದ್ಯಕೆ ನೀಡುವೇನು
ಈಶ್ವರನು ನೀನೇ ಜಗದೀಶ್ವರನು ನೀನೇ
ಕೋಟಿ ಈಶ್ವರನು ನೀನೇ ಶನೇಶ್ವರನು ನೀನೇ
ಬಂದ ಶನಿರಾಯನಿಗೆ ಕಂಡು ಕರಗಳನೆ ಮುಗಿದು
ಒಂದನೆಯನೇ ಮಾಡಿ ಬೇಸಗೊಂಡು ಕೇಳೆದಳು

ಯಾಕಯ್ಯ ಶನಿರಾಯ ಕೋಪಿಸಿ ಕೊಳಬೇಡ
ಆಕಳ ತುಪ್ಪದಲಿ ದೀಪ ಹಚ್ಚುವೆನು
ಮಕ್ಕಳನು ಮರಿಗಳನು ಕಷ್ಟಪಡಿಸಲುಬೇಡ
ಉಟ್ಟ ಸೀರೆಗಳನು ಮಟ್ಟು ಮಾಡುವರೆ.
ನಿನ್ನಹೆಸರಿನ ಮೇಲೆ ಒಳ್ಳೆಯ ಬ್ರಾಹ್ಮಣನಿಗೆ
ಎಣ್ಣೆಯ ನಾನೊತ್ತಿ ಬಿಸಿರ ನೆರವೇ
ಸಣ್ಣಕ್ಕಿ ಅನ್ನವನ್ನು ಬೆಣ್ಣೆ ಕಾಸಿದ ತುಪ್ಪ
ಚೆಂದದಿಂ ಅಡುಗೆಯನೇ ಮಾಡಿ ಬಡುಸುವೆನು

ಕರಿಯಲೆಯು ಬಿಳಿಅಡಿಕೆ ಪರಿಮಳದ ಗಂಧವನೆ
ಉಡುಗೊರೆಯನೇ ಕೊಟ್ಟು ಕರಗಳನೆ ಮುಗಿವೆ
ಇನ್ನುಮೇಲೆ ನಾನು ಒಂದುಗಳಿಗಿರುವುದಿಲ್ಲಾ
ನಿಮ್ಮ ಮನೆಗಳ ಬಿಟ್ಟು ಹೊರಟೋಗುತ್ತೀನಿ
ಏಳುರಾಟ ಶನಿಯನು ಊರಿಗೇ ಕಳುಹಿಸಿ
ಬರುವ ಮಾರ್ಗದಲಿ ಭಾಗ್ಯವನೆ ಕಂಡೆ.
ಸಾಲಾಗಿ ಮನೆಕಟ್ಟಿ ಸಾಲವನು ತೀರಿಸಿ
ವರವನ್ನು ಕೊಡುವನು ನಮಗೆ ಶ್ರೀವೆಂಕಟೇಶ

ಆಲಮೇಲು ಮಂಗಪುರಿ ಆದಿನಾರಾಯಣ
ಗೋವರ್ಧನೋದಾರ ಜಾನಕಿವಾಸ ॥ ಶ್ರೀವೆಂಕಟೇಶ

ಶನಿ ಮಹಾತ್ಮೆ.

ಮಂಗಳಾರತಿ ಎತ್ತಿರೆ ಅಂಗನೆಯರು ಮಂಗಳಾರತಿ
ಮಂಗಳಾರತಿ ಎತ್ತಿ ಮಹಾಮಹಿಳೆಯರೆಲ್ಲಾ ಭಂಗ ಹರಿಸಿದಂತ ಶನಿಮಹಾರಾಯಗೆ
ಮಂಗಳಾರತಿ ಎತ್ತಿರೆ

ಭುವನದೊಡೆಯ ವಿಕ್ರಮ ಆಸ್ಥಾನದೊಳ್ಗೆ  ಹವಣಿಸಿ ನುಡಿದನಗ
ನವಗ್ರಹದೊಳಗೆಲ್ಲಾ ಘನವಾದವರಾರು ಸುವೇಕದಿಂದ ನುಡಿದ ಜೋತಿಷ್ಯರೆಲ್ಲಾ.
ಭಾನು ಶ್ರೇಷ್ಠಾನೆನ್ನಾಲು ಮತ್ತೊಬ್ಬನು ವೇಣ್ಣಂಕ ಬುದ ಶ್ರೇಷ್ಠಾ ನು.
ನಾನಾ ಬಗೆಯಲ್ಲಿ ಮಂಗಲ ಬುದು ಗುರು ಶುಕ್ರ ದೀನ ರಾಹು ಕೇತುಗಳೆಂದು ನುಡಿದರು.

ಇವರ ಮಾತಂತಿರಲಿ ಶನಿ ಮಹಾರಾಯ ಪೃಥಿವೀ ಯೋಳು ಅತಿ ಶ್ರೇಷ್ಠಾನು.
ರವಿಗೆಕೋಷ್ಟವನ ಹಚ್ಚಿ ಅರುಣನನ್ನ ಹೇಳವ ಮಾಡಿ
ಜಗದಿ ತಿರುಗೋ ಅಶ್ವ ಕುರುಡನ್ನ ಮಾಡಿದಾ..
ಪಿತಗೆ ಕಷ್ಟವಾ ಕೊಟ್ಟನಂತ ಶನಿ ಮಹಾರಾಯ ಪೃಥಿವೀಯೋಳು ಅತಿ ಭ್ರಷ್ಟಾನು

ಶತ ಪಾಪಿಯಾದ ಭುಪತಿ ನಕ್ಕನೇನೂತಲಿ
ಕ್ಷತಿಗೆ ಮಾನಸ ಪುತ್ರ ಹೀಗೆಂದು ನುಡಿದನು
ಎನ್ನಯ್ಯ ವಿಕ್ರಮನೆ ಏನೇನು ಬಲು ಹೀನವಾಗೆ ಜರಿದೆ
ಏನಾದರಿದೊಂದು ವಿಧದಿಂದ ನಿನ ನೋಯಿಸಿ ಮಾನಹಾನಿ ತರುವೆ ಏನುತಾ ಪೊಗಲೂ

ಅತ್ತಪೋಗಲು ಶನಿಯು ಭುಪತಿಗಾಗ ಚಿತ್ತ ಚಂಚಲವಾಯಿತು
ವ್ಯರ್ಥ ವಾಯಿತಿ ಶನಿ ದೇವರ ಪೂಜಿಸು ಎಂದರುತ್ತಮರು ನುಡಿದರು ವಿಕ್ರಮನಿಗೆ
ಕಾಯವ ಮರಿಸಿ ಕೊಂಡು ಶನಿದೇವರು ಮಾಯಾ ಅಶ್ವವಾನೆತಂದು
ಉಪಾಯದಿಂದ್ ಕೋಡಲಗ ನೋಡುವೆನೇನೂತಲಿ ರಾಯನೇರಲು ತೇಜಿ ಹಾರಿತು ಗಗನಕೆ
ಮೊಸಹೋಯಿತು ಎನ್ನುತ್ತ ವಿಕ್ರಮ ರಾಯ ಬಲು ಕ್ಲೇಶ ಗೊಳುತ ಮನದಿ.

ದೇಶ ಕೋಶಗಳೇಲ್ಲಾ ಅಳಲಿ ಬಳಲಿ ಒಬ್ಬ ವೈಶ್ಯನ್ನ ಸುತೆಯಿಂದ
ವಿಕ್ರಮ ರಾಯಗೆ ಇಂದು ರತ್ನದ ಹಾರವ ಇವನು ಕದ್ದ ಎಂದು ತಂದೆಗೆ ಪೇಳಲು
ಬಿಣ್ಣಿಸಿ ಬಹುಬಗೆ ಇಂದ ರಾಜೇ ಗೆ ಪೇಳೇ
ಬಂದು ತೋರಲು ಚರರು ಬಂದೆಳೆ ದೈತ್ಯರು
ಏಕೆ ಕಾದ್ದೆಯೋ ಹಾರವ ಬೇಗನೆ ಕೊಟ್ಟು ಜೋಕೆ ಇಂದಲ್ಲಿ ಪೊಗಯ್ಯ.

ನಾಕಾಣೆ ಹಾರವ ಯಾಕೆ ಕೊಲ್ಲುವೆರೆನ್ನ
ಚಂದ್ರ ಶೇಖರ ನಾಣೆಗೂ ಕದ್ದವ ನಾನಲ್ಲಾ
ಕೂಳ ಇವನ ನೋಡದೆ ಕೊರೆಗೆ ವೈದು ಹಾಳೆರಿಯ ಮದ್ಯದಿ
ಕಾಲು ಕೈಗಳು ಕೊಯ್ದು ಬೀಳಿಸಿ ಬನೀರೆಂದು ಹೇಳಿದಂದದಿಮಾಡಿ ಊರ ಸೇರಿದರಾಗ

ಅನ್ನ ಆಹಾರ ಕಾಣದೇ ವಿಕ್ರಮರಾಯ ಮುಂದೇನು ಗತಿ ಎನಗೆ
ಏನ್ನ ಪಾಲಿಸು ಶನಿ ಮಹರಾಯ ಏನುತಾಲಿ ಬಣ್ಣಿಸಿ ಮನದಲ್ಲಿ ಧ್ಯಾನವ ಮಾಡಿದ
ತೇಲಿ ಸೊಸೆ ಎಂಬುವಳು ಮನೆಗೆ ಒಯ್ದು ಪಾಲಿಸು ತಿದ್ದಾಳು
ಬಾಲೇ ಪ್ರಭಾವತಿ ಮಾಲೆಯ ಹಾಕಲು
ಕಾಲು ಕೈಗಳು ಬೆಳೆದು ವೈಶ್ಯಗಳಿಯನಾದ ತನ್ನ ಪುರವ ಸೇರಿದ.
ವಿಕ್ರಮ ರಾಯ ಚೆನ್ನಾಗಿ ಸುಖಬಾಳಿದ.
ಬಣ್ಣದಿಂದಲಿ ಬರೆದೊದಿದವರೆಗೆ ಇಷ್ಟ್ರತ್ತವ ಚೆನ್ನಾಗಿ ಕೊಡುವಂತ ಶನಿ ಮಹಾರಾಯಗೆ

ಮಂಗಳಾರತಿ ಎತ್ತರೆ .

ಕಲಿ ಕಾರ್ಕೋಟಕ ನಾಗಷ್ಯ ನಳ ದಮಯಂತಿ ಈ ಐವರ ಸ್ತೋತ್ರಂ ಸಂಪೂರ್ಣಂ.

ಕಲ್ಪನೆಯ ಕೂಸು ಕಣ್ಣ ಮುಂದೆ ಬಂದು
ಕೊಟ್ಟಿತು ಕೆನ್ನೆಗೆ ಸಿಹಿ ಮುತ್ತೋಂದು.

10 months .

He has grown rapidly. Suddenly today I realized he is completing 10 month soon. Alredy 10 months passed yar..

Ega tumba imitation madtane.. Puttu bangara Have great future.

Appa..