ಶ್ರೀನಿವಾಸ ಕಲ್ಯಾಣ

ಸ್ತ್ರೀ ಯರೆಲ್ಲ ಬನ್ನಿರೆ ಶ್ರೀನಿವಾಸ ನ ಪಾಡೋಣ

ಜ್ಞಾನಗುರುಗಳಿಗೆ ವಂದಿಸಿ ಮುಂದೆ ಕಥೆಯ ಹೇಳೊಣ

ಗಂಗೆ ತೀರದಿ ಋಷಿಗಳು ಒಂದು ಯಾಗವ ಮಾಡುತ ಬಂದುನಿಂತ ನಾರದ ಮುನಿ ಯಾರಿಗೆಂದು ಕೇಳಲು

ಅರಿತು ಬರಬೇಕೆನುತಲಿ ಆ ಮೃಗಮುನಿ ಹೊರಟನು  ಅಂದು ರಾಯನ ಕಂದನ ಮಗನ ಮಂದಿರಕ್ಕೆ ಬಂದನು

ವೇದಗಳನ್ನು ಓದುತ್ತಾ ಹರಿಯ ಕೊಂಡಾಡುತ ಅಲ್ಲಿರುವ ಬೊಮ್ಮನ ಕಾಣುತ ಕೈಲಾಸಕ್ಕೆ ಬಂದನು

ಕಂಬುಕಂಠ ಪಾರ್ವತಿ ಕುಳಿತಿರುವುದನೆ ಕಂಡನು

ಪೃಥ್ವಿ ಯೊಳಗೆ ನಿಮ್ಮಲಿಂಗ ಶ್ರೇಷ್ಠ ವಾಗಲೆಂದನು ವೈಕುಂಠ ಕ್ಕೆ ಬಂದನು ವಾರಿಜಾತನ ಕಂಡನು 

ಕೆಟ್ಟ ಕೋಪದಿಂದ ಒದ್ದರೆ ಎಷ್ಟು ನೋಯಿತೆಂದನು 

ತಟ್ಟನೆ ಬಿಸಿನೀರ ತಂದು ನೆಟ್ಟಗೆ ಪಾದವ ತೊಳೆಯಲು.

ಬಂದ ಕಾರ್ಯವಾಯಿತೆಂದು ಅಂದು ಮುನಿಪ ತೆರಳಿದ.


ಬಂದು ನಿಂತು ಸಭೆಯೊಳಗೆ ಇಂದೀರೇಶನ ಪಾಡುತ

ಹರಿಯ ಕೂಡೆ ಕಲಹ ಮಾಡೆ ಕೊಲ್ಲಾಪುರಕೆ ನಡೆದಾಳು

ಸತಿಯು ಪೋಗೆ ಪತಿಯು ಹೊರಟು ಗಿರಿಯ ಬಂದು ಸೇರಿದ

ಹುತ್ತಾದೊಳಗೆ ಹತ್ತು ಸಾವಿರ ಗುಪ್ತವಾಗೆ ನೆಲಸಿದ.

ಬ್ರಹ್ಮ ಧೇನು ಆದನು ರುದ್ರ ವತ್ಸಲನಾದನು

ಧೇನು ಮುಂದೆ ಮಾಡಿಕೊಂಡು ಗೋಪಿ ಸುತೆಯು ಹೊರಟಾಳು

ಕೋಟಿ ಹೊನ್ನು ಬಾಳೋದು ಕೊಡದ ಹಾಲು ಕರೆವುದು. 

ಪ್ರೀತಿಯಿಂದಲಿ ತನ್ನ ಮನೆಗೆ ತಂದು ಕೊಂಡನು ಚೋಳನು.

ಚಂದದಿಂದಲಿ ಒಂದು ದಿವಸ ಕಂದಗೆ ಹಾಲು ಕೊಡಲಿಲ್ಲ.

ಅಂದು ರಾಯನ ಮಡದಿ ಕೋಪಿಸಿ ಬಂದು ಹೊಡೆದಳೆ ಗೋಪನ

ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ಹೋಗಲು 

ಕಾಮಧೇನು ಕರೆದ ಹಾಲು ಹರಿಯ ಶಿರದಿ ಬಿದ್ದಿತು

ಇಷ್ಟು ಕಷ್ಟ ಕೊಟ್ಟಿತೆಂದು ಪೆಟ್ಟು ಬಡಿಯೆ ಹೋದಾನು

ಕೃಷ್ಣ ತನ್ನ ಮನದಿ ಯೋಚಿಸಿ ಕೊಟ್ಟ ತನ್ನ ಶಿರವನ್ನು

ಎಳುತಾಳೆ ಮರದಿ ಉದ್ದ ಎಕವಾಗೇ ಹರಿಯಿತು.

ರಕ್ತವನ್ನು ಕಂಡ ಗೋಪನು ಮತ್ತೆ ಸ್ವರ್ಗ ಸೇರಿದ

ಕಷ್ಟವನ್ನೆಲ್ಲ  ತಿಳಿದ ಗೋವು ಅಷ್ಟು ಬಂದು ಹೇಳಿತು

ಶಂಖ ಚಕ್ರ ನಡಗುತ, ಶಿರದಿ ರಕ್ತ ಹರಿಯುತ 

ಇಷ್ಟು ಕಷ್ಟಗಳನು ಎಲ್ಲ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟ ಕಾರಣ ಭ್ರಷ್ಟ ಪಿಶಾಚಿಲಾಗೆಂದ

ಇಷ್ಟು ಕಲಿಯುಗ ಮುಗಿಯುವ ತನಕ ಕಷ್ಟ ತನಗೆ ಉಂಟೆಂದ

ಪೆಟ್ಟು ವೇದನೆ ತಾಳಲಾರದೆ ಬೃಹಸ್ಪತಿ ಚಾರ್ಯರ ಕರಿಸಿದ 

ಔಷಧಕ್ಕೆ ತನಗೆ ಒಂದು ಎರ್ಪಾಟಗಬೇಕೆಂದ

ಮೂರು ಹೆಜ್ಜೆಯ ಸ್ಥಳವ ಕೊಟ್ಟರೆ ಮೊದಲ ಪೂಜೆ ನಿಮಗೆಂದ 

ಪಾಕ ಪಕ್ವ ಮಾಡಲಿಕೆ ಆಕೆ ಬಕುಳೆ ಬಂದಳು 

ಬಾನು ಕೋಟಿ ತೇಜನು ಬೇಟೆಯಾಡೆ ಹೊರಟನು

ಮುಂದೆ ಬಾಚಿ ಗೊಂಡ್ಯ ಹಾಕಿ ದುಂಡುಮಲ್ಲಿಗೆ ಮುಡಿದನು

ಕರ್ಣ ಕುಂಡಲಕರದಿ ಹೊಳೆಯೆ ಕಸ್ತೂರಿ ತಿಲಕ ತಿದ್ದಿದ

ಅಂಗುಲಿಗೆ ಉಂಗುರವಿಟ್ಟು ರಂಗ ಶೃಂಗಾರ ವಾದನು

ಕನಕಭೂಷಣವಾದ ಕುದುರೆ ಕಮಲಾನಾಥ ನೇರಿದ

ಕರಿಯ ನೆನೆದು ಹರಿಯು ಬರಲು ಕಾಂತೆಯರು ಕಂಡರು

ಯಾರು ಬ್ರಾಹ್ಮಣ ಶ್ರೇಷ್ಠ ರಲಿ ನಾರಿಯರು ಇರುವೊ ಸ್ಥಳದಿ 

ಕಾರ್ಯವೇನು ನಿಮಗೆ ಇಲ್ಲಿ ಹೇಳು ಎಂದು ಕೇಳಲು

ಗಗನರಾಯನ ಮಗಳಲ್ಲೆ ಕಾರ್ಯ ಉಂಟು ನಮಗೆಂದ

ಅಷ್ಟುಮಂದಿ ಸೇರಿಕೊಂಡು ಪೆಟ್ಟು ಬಡಿಯೆ ಹೋದರು

ಕಲ್ಲು ಮಳೆಯ ಕರೆದರು ಕುದುರೆ ಕೆಳಗೆ ಬಿದ್ದಿತು

ಕ್ಲೇಷ ಪಟ್ಟು ವಾಸುದೇವ ಶೇಷ ಪರ್ವತ ಸೇರಿದ

ಪಾರ ಮನ್ನ ಮಾಡಿಕೊಂಡು ಉಣ್ಣು ಮಗನೇ ಎಂದಳು 

ಅಮ್ಮ ನನಗೆ ಅನ್ನ ಬೇಡ ನನ್ನ ಮೇಲಿನ ವೈರಿಯೆ ಕಣ್ಣು ಕಾಣದ ದೈವ ಆಕೆಯನ್ನು ನಿರ್ಮಾಣ ಮಾಡಿದ

ಯಾವದೇಶ ಎಂದಳಾಕೆ ಈಗ ನನಗೆ ಹೇಳೆಂದಳು


ಕಂಚುಮಣಿಯ ಧರಿಸಿಕೊಂಡು ಕೂಸು ಕಂಕುಳಲೆತ್ತಿಕೊಂಡು 

ಧರಣಿ ದೇವಿಗೆ ಕಣಿಯ ಹೇಳಿ ಗಿರಿಯ ಬಂದು ಸೇರಿದ

ಹೊನ್ನು ಹಣವು ಒಂದು ಎಂದರೆ ಕನ್ನಿಕೆ ಯಾಕೆ ದೊರಕಲಿಲ್ಲ 

ಚಿಕ್ಕವಳಿಗೆ ಮಕ್ಕಳಿಲ್ಲ ಮತ್ತೆ ಮದುವೆ ಮಾಡುವೆ ಮನ್ನಿಸಿ ಬಂದೆನ್ನನು ಧನ್ಯನಾಗೆ ಮಾಡೆಂದ 

ಕುಬೇರನ್ನ ಕರೆಸಿದ ಹಣವನ್ನೆ ತರಿಸಿದ 

ವಲ್ಲಭಳ ಕರಿಯಲಿಕೆ ಕೊಲ್ಹಾಪುರಕೆ ಹೋದರು


ಅಷ್ಟವರ್ಗವನ್ನೆ ಮಾಡಿ ಇಷ್ಟ ದೇವರ ಪೂಜಿಸಿ 

ಲಕ್ಷ್ಮಿ ಸಹಿತ ಹೊರಟಾರಗ ಅರ್ತಿಯಿಂದಲೆ ನಡೆದರು

ಗರುಡ ಹೆಗಲ ಹೇರಿಕೊಂಡು ಸಕಲ ಸುರರು ನೆರೆದರು

ಅರ್ತಿಯಿಂದಲೆ ಮುತ್ತು ಮಾಣಿಕ ಮಂಟಪದಲ್ಲಿ ಕುಳಿತರು

ಕನ್ಯೆ ಯಾದ ಪದ್ಮಾವತಿಗೆ ಕಂಕಣವ ಕಟ್ಟಿದ 

ವೆಂಕಟೇಶ ಪದ್ಮಾವತಿಗೆ ಮಾಂಗಲ್ಯ ಕಟ್ಟಿದ

ಶ್ರೀನಿವಾಸನ ಮದುವೆ ನೋಡಲು ಸ್ತ್ರೀ ಯರೆಲ್ಲ ಬನ್ನಿರೆ

ಪದ್ಮಾವತಿಯ ಮದುವೆ ನೋಡಲು ಮುದ್ದು ಬಾಲೆರು ಬನ್ನಿರಿ.


----------------------------------------------------------------------------

ಅರ್ತಿಯಿಂದ ಹೇಳಿಕೇಳಿದ ಮನುಜರಿಗೆ ಮುಕ್ತಿ ಪದವಿ ಕೊಡುವ ಶ್ರೀವೆಂಕಟೇಶ. 

----------------------------------------------------------------------------


ಬೆಟ್ಟದೊಡೆಯ ಶ್ರೀನಿವಾಸ ಗೆ ನಿತ್ಯ ಮಂಗಳಂ

ಲೋಕಮಾತೆಯಾದ ಪದ್ಮಾವತಿ ಗೆ ಮಂಗಳಂ!!ಪ!!

ಎರಡು ಕರದಿ ಶಂಖಚಕ್ರವು ಗದೆಯು ಪದ್ಮವು

ಶೃಂಗಾರ ದೊಡಗೂಡಿ ದ್ವಾರ ವಜ್ರದ ಬಂಗಾರ ವಿರುವನು.!!೧!!

----------------------------------------------------------------------------

No comments:

Post a Comment