ಒಂದು ಅದ್ಭುತ ಕಾರ್ಯಕ್ರಮ

 ಇಂದು ಒಂದು ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದ ಆನಂದ. ಸೋದರಿ ನಿವೇದಿತಾ ಪ್ರತಿಷ್ಠಾನ, ಶಿವಮೊಗ್ಗ ಇವರು ಊರ ಹೊರಗಿನ ಸ್ಲಂ(ಸೇವಾ ಬಸ್ತಿ) ಒಂದರ ಒಂದಷ್ಟು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅದರಲ್ಲಿ ಏನು ಮಹಾ ಅಂತೀರಾ? 


ಸೋದರಿ ನಿವೇದಿತಾ ಪ್ರತಿಷ್ಠಾನ ಒಂದು ಸಾಮಾಜಿಕ ಸಂಘಟನೆ ನನ್ನಾಕೆ ಈ ಸಂಘಟನೆ ಸೇರಿ ಹತ್ತಿರ ಹತ್ತಿರ ಎರಡು ವರ್ಷ ಆಯಿತು. ಹಾಗೆ ನಾನು ಯುವ ಬ್ರಿಗೇಡ್ ಗೆ ಜೋಡಿಸಿ ಕೊಂಡಿದ್ದೀನಿ. ಚಿಕ್ಕ ಮಕ್ಕಳು ಇರುವುದರಿಂದ ನಾವೇನು ಎಲ್ಲಾ ಕಾರ್ಯಕ್ರದಲ್ಲಿ ಜೋಡಿಸಿ ಕೊಂಡಿಲ್ಲಾವಾದರು ಸಮಯದ ಪರಿಧಿಯಲ್ಲಿ ಎಷ್ಟು ಸಾದ್ಯವೋ ಅಷ್ಟು ಕೆಲಸದಲ್ಲಿ ಪಾಲ್ಗೊಳುತ್ತೇವೆ. 


ಸೋದರಿ ನಿವೇದಿತಾ ಪ್ರತಿಷ್ಠಾನದ ಈ ಕಾರ್ಯಕ್ರಮ ತುಂಬಾ ಅರ್ಥ ಪೂರ್ಣವಾಗಿತ್ತು. ಪ್ರತಿಷ್ಠಾನದ ಸದಸ್ಯರು ಊರ ಹೊರಗಿರುವ ಸೇವಾ ಬಸ್ತಿಯ ಮಕ್ಕಳ ಜೊತೆ ನಿರಂತರ ಸಂಪರ್ಕ ವನ್ನು ಮಾಡಿದ್ದಾರೆ. ವರ್ಷ ಪೂರ್ತಿ ಮಕ್ಕಳೊಂದಿಗೆ ವಿವಿಧ ಕಾರ್ಯಕ್ರಮ ಹಾಗೂ ನಿರಂತರ ಕಲಿಕೆ ತರಗತಿ ಇಂದ ಮಕ್ಕಳ ಸರ್ವಾಂಗೀಣ ಅಭಿವೃದಿಗೆ ಸೋದರಿಯರು ಶ್ರಮ ಪಡುತ್ತಿದ್ದರೆ. 

ಈ ಕಾರ್ಯಕ್ರಮಕ್ಕಾಗಿ ಒಂದು ತಿಂಗಳಿಂದ ಹಾಡು, ನೃತ್ಯ, ದೈಹಿಕ ಶಿಕ್ಷಣ  ನೀಡಿ ಅಣಿ ಗೊಳಿಸಿದ್ದರು. 


ಈ ದಿನ ಮಕ್ಕಳು ನಿತ್ಯ ಶ್ಲೋಕ ಗಳಿಗೆ ಅಭಿನಯಿಸಿ ಶ್ಲೋಕದ ಮಹತ್ವ ತಿಳಿಸಿದರು. ನಂತರ ಜೋಗದ ಸಿರಿ ಹಾಗೂ ಶಿಶು ಗೀತೆಗೆ ನೃತ್ಯ ಮಾಡಿದರು. ಹನುಮಾನ ಚಾಲೀಸಗೆ ಅಭಿನಯಿಸಿ ಮಾಡಿದ ದೃಶ್ಯ ರೂಪಕ ಮನಸ್ಸಿಗೆ ಮುದ ನೀಡಿತು. ಹನುಮಾನ ವೇಶಧಾರಿ ಸೊಗಸಾಗಿ ಅಭಿನಯಿಸಿದನು. ಕೊನೆಯಲಿ ಅವರು ಪ್ರದರ್ಶಿಸಿದ ದೈಹಿಕ ಕಸರತ್ತು ಎಲ್ಲರ ಗಮನ ಸೆಳೆಯಿತು. ವಿವಿಧ ಪಿರಮಿಡ್  ಆಕೃತಿ, ಕೊನೆಯಲ್ಲಿ ಮಾಡಿದ ಅಲೆಗಳು ತುಂಬಾ ಚೆನ್ನಾಗಿ ಮೂಡಿ ಬಂದವು. ಪ್ರೇಕ್ಷಕರ ೫ ನಿಮಿಷ ಕರತಾಡನ ಮಾಡುತ್ತಲೇ ಮಕ್ಕಳಿಗೆ ಹರಿಸಿದರು. 


ಇದರ ಹಿಂದಿನ ಪ್ರತಿಷ್ಠಾನದ ಸೋದರಿಯರ ಪರಿಶ್ರಮ ಎಷ್ಟು ಹೇಳಿದರು ಕಡಿಮೆಯೇ. 


ಇವರ ಕಾರ್ಯ ಹೀಗೆ ಮುಂದುವರಯಲಿ ಎಂದು ಪ್ರಾರ್ಥಿಸುತ್ತಾ. 








No comments:

Post a Comment