ಅದ್ದೂರಿ

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಣೆ
ಬಿಟ್ಟು ಹೋಗೋ ದಾರಿಯಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ
ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ
ಕಣ್ಣಿರಿಗು ಒಂದು ಕೊನೆಯ ಆಸಇದೆ
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತಿದೆ


ನಿನ್ನಾಣೆಗು ಗೊತ್ತಿಲ್ಲ ಈ ಒಂಟಿಯ ಹೊಸ ಆಟ
ಕಳೆದು ಹೋಗುವ ಮುನ್ನ ಕೈ ಸೇರಬಾರದೆ
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವನ್ನ ನೀನೊಮ್ಮೆ ಕೇಳಬಾರದೇ
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ
ಎದೆ ಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗುವ ಮನಸೆಲ್ಲಿದೆ, ಚೂರಾದರೂ ಮನಸಲ್ಲಿದೆ
ನಿನ್ನ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ


ಎದೆ ಮೇಲೆ ಮಾಡಿಟ್ಟ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾದರೆ
ಉಸಿರಗೋ ಮುಂಚೇನೆ ಹೃದಯಕೆ ತಾಯಾಗಿ
ಬಡಿತಗಳ ಕೈ ತುತ್ತಾ ನಿಡಬಾರದೇ
ಹೆಸರನ್ನು ಬರೆದಿದ್ದಾ ಆ ಮೋಡಕ್ಕೂ ಉಸಿರಿಲ್ಲ
ಮನಸಾರೆ ಅಳಿಸೋಕೆ ಇದು ಗೊಬೆಯ ಕನಸಲ್ಲಾ
ಈಗಾಗಲೇ ನೋವಾಗಿದೆ ದೂರಗಲೂ ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವು ಬಿಳುತಿದೆ


No comments:

Post a Comment