ಎಲ್ಲೆನ್ನ ಮನದನ್ನೆ


ಎಲ್ಲೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ, ಉಷೆಯ ಗೆಳತಿ
ಏಳು ಮುದ್ದಿನ ಚೆಂಡೆ, ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ, ಮಟಾಗಾತಿ..

ಎಲ್ಲೆನ್ನ ಕಲ್ಯಾಣಿ, ಏಳು ಭಾವದ ರಾಣಿ
ನೋಡು ಮುದಳದಲಿ ರಾಗ ಮಿಲನ
ಮರದುದಿಯ ತೋರಣದಿ ಹೊಂಬಿಸಿಲ ಭಾವುಟವು
ಗಾಳಿ ಬಟ್ಟೆಯಲದರ ಚಲನ ವಲನ..

ಮಂಜಿರಲೆಯ ಹಿಂಜಿ ದೂರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೋಗರರಿಹನು ಎಲ್ಲೆನ್ನ ಹೊಂಗೆಳತಿ
ಮಗವ ಜವನಿಗೆ ತೆರೆದು ನಗೆಯ ನೀಡು..

ಲಲಿತ ಶೃಂಗಾರ ರಸ ಪೂರ್ನೆ ಚಂದಿರ ವಾರ್ನೆ
ದೃಷ್ಟಿ ತೆಗೆಯಲು ಒಂದು ಮುತ್ತ ನಿಡುವೇ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕತೆ ಹೇಳು
ಒಂದು ಚಣ ಜಗವನೆ ಮರೆತು ಬಿಡುವೆ..

No comments:

Post a Comment